ರಾಬರ್ಟ್‍ಸನ್, ವಿಲಿಯಮ್
   1721 - 93. ಸ್ಕಾಟ್ಲೆಂಡಿನ ಚರಿತ್ರಕಾರ. ಸರಳ ಶೈಲಿಗೂ ಉತ್ತಮ ಭೌಗೋಳಿಕ ವರ್ಣನೆಗೂ ಸ್ಪಷ್ಟ ಕಥನಕ್ಕೂ ಕುಶಲ ರಚನೆಗೂ ಹೆಸರಾದ ಈತನ ಅನೇಕ ಚಾರಿತ್ರಿಕ ಗ್ರಂಥಗಳನ್ನು ಜನಪ್ರಿಯನಾದ. ಮೇರಿ ರಾಣಿ ಮತ್ತು ಆರನೆಯ ಜೇಮ್ಸ್ ದೊರೆಗಳ ಕಾಲದಲ್ಲಿಯ ಸ್ಕಾಟ್ಲೆಂಡ್ ದೇಶದ ಚರಿತ್ರೆ (1759); ಐದನೆಯ ಚಾರಲ್ಸ್ ದೊರೆಯ ಕಾಲದ ಚರಿತ್ರೆ (2769) ಮತ್ತು ಅಮೆರಿಕ ದೇಶದ ಚರಿತ್ರೆ (1777) - ಇವು ಈತ ಬರೆದ ಮುಖ್ಯ ಚಾರಿತ್ರಿಕ ಗ್ರಂಥಗಳು.						
(ಸಿ.ಕೆ.ವೈ.ಡಿ.)